ಅನುತ್ರಿಜ್ಯವೇಗ
	
ವಕ್ರರೇಖೆಯ ಮೇಲೆ ಚಲಿಸುವ ವಸ್ತುವಿನ ವೇಗ ಸ್ಪರ್ಶಕದ ದಿಕ್ಕಿನಲ್ಲಿರುತ್ತದೆ. ಎರಡು ಪರಸ್ಪರ ಲಂಬದಿಕ್ಕುಗಳಲ್ಲಿ ಈ ವೇಗದ ಘಟಕಗಳನ್ನು (ಕಾಂಪೊನೆಂಟ್ಸ್) ತಿಳಿಯಬಹುದು. ಮೂಲ ಬಿಂದುವನ್ನು ವಸ್ತುವಿಗೆ ಜೋಡಿಸುವ ರೇಗೆ ಮತ್ತು ವಸ್ತುವಿನಲ್ಲಿ ಈ ರೇಖೆಗೆ ಲಂಬವಾಗಿ ಎಳೆದ ರೇಖೆ ಇವೇ ಇಂಥ ಎರಡು ದಿಕ್ಕುಗಳು. 

ಚಿತ್ರ-1

	
ಮೊದಲಿನ ರೇಖೆಯ ಹೆಸರು ಅನುತ್ರಿಜ್ಯ ಅಥವಾ ಆರೆ. ಈ ರೇಖೆಯ ದಿಕ್ಕಿನಲ್ಲಿರುವ ವಸ್ತುವಿನ ವೇಗ ಘಟಕ ಅನುತ್ರಿಜ್ಯವೇಗ ಅಥವಾ ಆರೀಯವೇ (ರೇಡಿಯಲ್ ವೆಲಾಸಿಟಿ).
ಔಐ ದಿಕ್ಕಿನ ಅನುತ್ರಿಜ್ಯವೇಗ 
Pಒ ದಿಕ್ಕಿನ ವೇಗ 
ಗ್ರಹಗಳ ಚಲನೆಯನ್ನು ಕುರಿತು ವಿಚಾರ ಮಾಡುವಾಗ, ಮೂಲಬಿಂದುವನ್ನು ಸೂರ್ಯನ ಸ್ಥಾನದಲ್ಲಿ ತೆಗೆದುಕೊಳ್ಳಬಹುದು. ಗ್ರಹದ ಕಕ್ಷೆ ಸೂರ್ಯ ನಾಭಿಯಲ್ಲಿರುವ ದೀರ್ಘವೃತ್ತ. ಸೂರ್ಯ ಆಕರ್ಷಣಕೇಂದ್ರ. ಗ್ರಹದ ಸ್ಥಾನಗಳನ್ನು ಸೂರ್ಯನಿಗೆ ಸೇರಿಸುವ ರೇಖೆಗಳು ಅನುತ್ರಿಜ್ಯಗಳು. ಗ್ರಹದ ವೇಗವನ್ನು ಅನುತ್ರಿಜ್ಯವೇಗ ಮತ್ತು ಅದಕ್ಕೆ ಲಂಬದ ದಿಕ್ಕಿನಲ್ಲಿರುವ ವೇಗಘಟಕಗಳಾಗಿ ವಿಭಜಿಸಬಹುದು.
	
ನಕ್ಷತಗಳಿಗೆ ಎರಡು ವಿಧದ ಚಲನೆ ಇರುತ್ತದೆ. 1. ಅದರ ಸ್ವಕೀಯಚಲನೆ (ಪ್ರಾಪರ್ ಮೋಷನ್). ಇದನ್ನು ಖಗೋಳದ ಮೇಲೆ ನಕ್ಷತ್ರದ ಕೋನೀಯ ಚಲನೆಯಿಂದ (ಆ್ಯಂಗ್ಯುಲರ್ ಮೋಷನ್) ತಿಳಿಯುತ್ತೇವೆ. 2. ದೃಷ್ಟಿರೇಖೆಯ ದಿಕ್ಕಿನಲ್ಲಿಯ ಚಲನೆ. ಇದನ್ನು ಅನುತ್ರಿಜ್ಯವೇಗದಿಂದ ಗೊತ್ತು ಮಾಡಬಹುದು. ಒಂದು ನಕ್ಷತ್ರದ ರೋಹಿತದರ್ಶಕದ ಅಭ್ಯಾಸದಿಂದ ಆ ನಕ್ಷತ್ರದ ಅನುತ್ರಿಜ್ಯವೇಗವನ್ನು ತಿಳಿಯಬಹುದು.
(ನೋಡಿ- ಡಾಪ್ಲರ್-ಪರಿಣಾಮ)
(ಆರ್.ಆರ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ